ಪೋಸ್ಟ್‌ಗಳು

ಶೂನ್ಯವಾದ ದುಂಡಿನ ಕನಸು.. ಜಾಜಿ ಸೂಜಿ ನೋಡಿ ಅರಳಿತು ಮನಸು ..

ಇಮೇಜ್
 ಹಿತ್ತಲಿನ  ಗಿಡ  ಮದ್ದಲ್ಲವೆಂದರೆ ಏಕೆ ಹಂಬಲಿಕೆ  ವರ್ಷಾನು ವರ್ಷ ಕಾಡಿತು ಅಗಲಿಕೆ  ಬೇಸಿಗೆಯ ಬೇಗೆಯಲ್ಲೂ ಬೀರಿತು ಕಂಪು ಅಂಗಳಕೆ  ತಂಗಾಳಿಯಲಿ ತೇಲಿ ಅಲೆಅಲೆಯಾಗಿ ಹರಡಿತು  ದುಂಡಿನ ಕನಸು ಶೂನ್ಯ ವಾಯಿತು  ಸುತ್ತಿ ಸುತ್ತು ಹುಡುಕುತ್ತಾ  ಸುಸ್ತಾಯಿತು      ಮೆಲ್ಲಗೆ ಮುಗಿಲಿಗೆ ಹರಡಿ ಅದರ ಮಗ್ಗಿ  ಮೊದಲ ಮೊಗ್ಗಿನ ಸಂಭ್ರಮ  ಮುಖ ಹಿಗ್ಗಿ ಹಾತುರತೆ  ಕಾತುರತೆ ಗೊಂಚಲಗಳು ಸುಗ್ಗಿ   ಈ ಸದ್ದಿಲ್ಲದ ಗಿಡದ ಹಂಬಲ ಸದಾ  ಹಿತ್ತಲಿನ ಚಿಲಕ ಹಾಕದೆ ಮುಚ್ಚದೆ ಕದಾ  ಸೊಬಗನ್ನು ವರ್ಣಿಸಲಾಗದ ನನ್ನ ಪದಾ  ನೋಡಲು ಮೊಗ್ಗಿನ ಅರಳುವಿಕೆಯ ಬೆಳೆವಣಿಗೆ  ಸಾಲಾಗಿ ಫೋಟೋ ವಿಡಿಯೋಗಳ ಮೆರವಣಿಗೆ  ನನ್ನ ಸಂತಸಕ್ಕೆ ಪೂರಕವಾಗದ ನನ್ನ ಬರವಣಿಗೆ  ಹಂಬಲದ  ಬೇಗೆಗೆ ಕೊನೆಗೂ ಸಿಕ್ಕಿತು ಬೀಸಣಿಗೆ

ಮರಳಿ ಕಣ್ಣಲಿ ಬಂತು ತುಂತುರು

ಇಮೇಜ್
 ಮರವಿಲ್ಲದ ನೆರಳು  ಸೆರಗಿಲ್ಲದ ಕರಳು  ಬಿಸಿಲು ಚಳಿಯಲ್ಲೂ ಅರಳು  ಆಸರೆಯ ಆ ಬೆರಳು  ಅವಳಿಲ್ಲದ ತವರು ಬೋಳು  ತಿರುಗಿತು ಕಾಲಚಕ್ರದ ಒರಳು  ಮಾಡಿ ಎಲ್ಲವನ್ನು ನುಚ್ಚುನೂರು  ನೆನಪೇ ಬರೀ ಬರಲು  ಬಾರದ ಅವಳ ಹಾದಿ  ಕಾತುರದಿಂದ ಕಾಯಲು  ಕರಳಿಂದ ಬಂದ ಬಳ್ಳಿಯ ಆ ಚಿಗುರು  ಬೇರು ಬೇರೆಯಾಗಿ ನಿಂತರು ಉಸಿರು  ಮರಳಿ ಕಣ್ಣಲಿ ಬಂತು ತುಂತುರು 
ಇಮೇಜ್
  " ಆರೋಗ್ಯವೇ ಭಾಗ್ಯ " ಎನ್ನುವ ಗಾದೆ ಮಾತು ಕೇವಲ ಶಾಲೆಯ ಪ್ರಬಂಧದ ವಿಷಯವಾಗಿ ಉಳಿದಿದೆ . ನಮ್ಮಲ್ಲಿ ಎಷ್ಟು ಮಂದಿ ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ನಮ್ಮ ಆರೋಗ್ಯದ ಮೇಲೆ   ಹೆಚ್ಚಿನ ಕಾಳಜಿ ವಹಿಸಿದ್ದೆವೆ ? ಇಡೀ ವಿಶ್ವವೇ ಕೋವಿಡ್ ಮಹಾಮಾರಿಯಿಂದ   ಬಳಲುತ್ತಿರುವಾಗ ಬಹುಷಃ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಲ್ಲದೆ ಇದನ್ನು ಒಂದು ವ್ಯವಸ್ಥೆಯನ್ನಾಗಿಸಿ ನಮ್ಮ ಸರ್ಕಾರದ ಕೈಗೆ ಕೊಟ್ಟಿದ್ದಿವೇನೊ ಅಂತ ಅನಿಸುತ್ತಿದೆ. ಎಲ್ಲರೂ ಅಂದ್ರೆ ವಯಸ್ಸಿನ ಬೇಧವಿಲ್ಲದೆ ಇಪ್ಪತ್ತರ ಹರೆಯರಿಂದ ಹಿಡಿದು ವಯೋ ವೃದ್ಧರ ತನಕ ಎಲ್ಲರೂ ಅಸುನೀಗಿದ್ದಾರೆ.ನಾವೇನು ಮಾಡೋಕ್ಕೆ ಆಗತ್ತೆ ಅಂತ ನಮ್ಮ ವರ್ತನೆಯ ಸಮರ್ಥನೆ ಮಾಡಿಕೊಳ್ಳಬಹುದು . ಪರಿಸ್ಥಿತಿ ಹೀಗಿದ್ದಾಗ ನಮ್ಮ ವೈಯಕ್ತಿಕ ಆರೋಗ್ಯದ ಸ್ಥಿತಿಗಿಂತ ದೇಶದ ವ್ಯವಸ್ಥೆಯು ಅನಾರೋಗ್ಯದ ಪರಿಸ್ಥಿತಿಯಲ್ಲಿದೆ ಅನ್ನುವುದು ಎದ್ದು ಕಾಣುತ್ತದೆ . ಎಲ್ಲದಕ್ಕೂ ಸರ್ಕಾರದ ಕಡೆ ಕೈಮಾಡಿ ತೋರಿಸುವ ನಾವು ನಮ್ಮ ಜವಾಬ್ದಾರಿಯ ಬಗ್ಗೆ ಉಸಿರು ಒಡೆಯುವುದಿಲ್ಲ . ಅಮೇರಿಕಾ ಯುರೋಪ್ ಸರ್ಕಾರಗಳು ಸಹಾನುಭೂತಿಯೊಡನೆ ಧನಸಹಾಯ ಹಾಗು ಉಪಕರಣಗಳ ಸರಬರಾಜಿನೊಂದಿಗೆ ಭಾರತಕ್ಕೆ ಸಾಂತ್ವಾನ   ನೀಡುತ್ತಿವೆ . ಈ ಒಂದು ಹಾದಿಯಲ್ಲಿ ಬ್ರಿಟನ್ನಿನ್ನ ಕನ್ನಡಿಗರು ನಮ್ಮ ತಾಯ್ನಾಡಿನ ಸೇವೆಗೆ ಮುಂದಾಗಿದ್ದಾರೆ...

''ಕೌಸ್ತಭಮ್ ಕರ್ನಾಟಕಂ''

ಇಮೇಜ್
  ನಮ್ಮ ಬೇರುಗಳಿಗೆ ಸಂಪರ್ಕ ಕಲ್ಪಿಸುವ ಜಾನಪದ ಕಲಾ ಉತ್ಸವ. ಕನ್ನಡದ ಕಂಪು ಸಮುದ್ರದಾಚೆ ಪ್ರಸರಿಸಿ ಆಂಗ್ಲ ನಾಡಿನಲ್ಲಿಯಷ್ಟೇ ಅಲ್ಲದೆ ಭಾರತದಲ್ಲೂ ಕಲಾ ರಸಿಕರನ್ನು ರಂಜಿಸಿತು. ಕರ್ನಾಟಕದ ಸಾಂಪ್ರದಾಯಿಕ ಹಾಗು ಐತಿಹಾಸಿಕ ಜಾನಪದ ಸಂಗೀತ ಹಾಗು ನೃತ್ಯ ಕಲೆಗಳನ್ನು ಮೇ 8 ರಂದು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ   ಪ್ರದರ್ಶಿಸಲಾಯಿತು. ಭಾರತೀಯ ವಿದ್ಯಾ ಭವನ-ಲಂಡನ್ ಸಹಯೋಗದೊಂದಿಗೆ ಸಂಸ್ಕೃತಿ ಸೆಂಟರ್ ಓಫ್ ಕಲ್ಚರಲ್ ಎಕ್ಸೆಲೆನ್ಸ್ಯಿಂದ ಕಲ್ಪಿಸಲ್ಪಟ್ಟ ಮತ್ತು ಆಯೋಜಿಸಲ್ಪಟ್ಟ ''ಕೌಸ್ತಭಮ್ ಕರ್ನಾಟಕಂ'' ಎಂಬ ಕಾರ್ಯಕ್ರಮವು ಅಪಾರ ಮೆಚ್ಚುಗೆಯನ್ನು ಗಳಿಸಿ ಮತ್ತು ಗಡಿಯಾಚೆ ನೆಲಸಿದ ಪ್ರೇಕ್ಷಕರನ್ನು ಮನೋರಂಜಿಸಿತು. ಲಂಡನ್‌ನ ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮತ್ತೂರು ನಂದಕುಮಾರ ಈ ಸಂದರ್ಭದಲ್ಲಿ ಆರಂಭಿಕ ಮಾತುಗಳನ್ನು ನೀಡಿದರು. ಭಾಗವತದ ಆಯ್ದ ಭಾಗದಿಂದ ಆರಂಭಗೊಂಡು ಡಾ.ನಂದಾಅವರು ವಿಶೇಷವಾಗಿ ಪುರಂದರ ದಾಸ ಕುರಿತು ಮಾತನಾಡುತ್ತಾ ಅವರ   ಕೃತಿಗಳ ಮಹತ್ವ ರಾಮಾಯಣ ಮಹಾಭಾರತದಂತಹ ಸಂಸ್ಕೃತ ಭಾಷೆಯ   ಕಥೆಯನ್ನು ಸರಳ ಶಬ್ದಗಳಲ್ಲಿ ಸಾಮಾನ್ಯ ಜನರಿಗೆ ತಿಳಿಸಿ ಸಮಾಜದ ಉದ್ಧಾರದ ಬಗ್ಗೆ ಅವರಿಗಿದ್ದ ಶ್ರದ್ದೆ ಭಕ್ತಿಯನ್ನು ಹೊಗಳುತ್ತಾ ‘ಹರಿ ಕುನಿದ ನಮ್ಮ ’ ಹಾಡನ್ನು ಸಂಕ್ಷಿಪ್ತವಾಗಿ   ಪ್ರಸ್ತುತಪಡಿಸಿದ್ದು ಈ ಸಂದರ್ಭಕ್ಕೆ ಮೆರುಗು ನೀಡಿತು. ನಂತರ   ಯೋಗೀಂದ್ರ ಮರವಂತೆ ಅವರು 500 ವರ್ಷಗಳ ಹಳೆ...