ಪೋಸ್ಟ್‌ಗಳು

ಸ್ವಂತವಾಗದ ಸ್ವಾತಂತ್ರ

 ಗಡಿಯಾಚೆ ಗೆ ಅಟ್ಟಿದರು ಸ್ಥಬ್ದವಾಗಿದೆ ಗಡಿಯಾರ  ಘುಲಾಮ ಆಗಿಹುದು ಇನ್ನೂ ಹೆಣ್ಣಿನ ಅಧಿಕಾರ    ಬಡವರ ಕೂಗು ಮುಗುಲಿಗೇರಿ ಮಾಡುತಿಹುದು ಹಾಹಾಕಾರ ತರಳರು  ಅನಾಥರಾಗಿ ಮಾಡಲಿಲ್ಲಹರು ಅಂತಿಮ ಸಂಸ್ಕಾರ ಕುಲ ಮತ ಭೇಧಗಳು ಮಾಡಿವೆ ಮಾನವೀಯತೆಯ ಸಂಹಾರ ಸ್ವಂತವಾಗದ  ಸ್ವಾತಂತ್ರ ತಂತ್ರ ಕುತಂತ್ರಗಳ ನಡುವೆ ಸಂಚಾರ ಭರತನ  ಭಾರತದಲ್ಲಿ  ಇದ್ದರೂ ಸಿರಿತನ ಅಪಾರ  ಅರಿವಿನ ಬಡತನದ  ಗೊಡ್ಡು ಸಂಪ್ರದಾಯದ  ಪ್ರಚಾರ  ದೇಶ ಪ್ರೇಮ ಕೇವಲ ಸ್ವಾತಂತ್ರ ದಿನಕ್ಕೆ ಸೀಮಿತವಾದ ಆಚಾರ ಹೆಣ್ಣನ್ನ ಗೌರವಿಸೀ ದೇಶದ ಹೊನ್ನನ್ನು  ರಕ್ಷಿಸಿ ಮಣ್ಣನ್ನು ಸ್ವಚ್ಛವಿಟ್ಟು ಕಾಪಾಡೀ ಭವ್ಯ  ದೇಶದ ವಿಚಾರ 

ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು

ಗುಟ್ಟಿನ ಗಂಟಿನೊಂದಿಗೆ ನಿನಗೇಕೆ ನಂಟು  ಗಂಟಿನೊಂದಿಗೆ ನೀ ಬಿಡಿಸು ಸಂಬಂಧಗಳ ನಿಘಂಟು  ಗಂಟಿನಲ್ಲಿ ಏನಿದೆಯೋ ಅದು ನಿನಗಷ್ಟೆ ಗೊತ್ತು  ಬೇರೆಯವರಿಗೆ ಅದು ತಿಳಿಯದಿರಲು ನಿನಗೇಕೆ ಗತ್ತು   ದುಃಖದ ಗಂಟು ಭಾರ, ಇಳಿಸು ಅದನ್ನು ಆಗುವುದು ಮನಸ್ಸು ಹಗುರ  ಸುಖದ ಗಂಟು ಉತ್ಸಾಹ ಭರಿತ, ಗಂಟು ಬಿಚ್ಚದೆ ನೀ ಆಗಬೇಡ ನರಿತ  ಹಂಚಿಕೊಂಡರೆ ನೀ ಈ ಬುತ್ತಿಯ ಗಂಟು, ಒಗ್ಗಟ್ಟಿನ ಒಗಟು ಬಿಡಿಸಿ ನೀ ಬೆಸೆವೆ ಜನುಮದ ನಂಟು  ಜೂಲೈ ೫ನೇ ಅನುಭವ  ನುರಿತ ಅರಿತ ನಿಪುಣರೊಂದಿಗೆ(ಸಹ ಸ್ಪರ್ಧಿಗಳು) ಕಳೆದ ಕ್ಷಣ  ದಿಗ್ಗಜರು(ಡಾ .ಸೋಮೇಶ್ವರ್) ಮಾಡಿಸಿದರು ದಿಗಂತದ ದರ್ಶನ   ಮಾತ್ರವಲ್ಲ ಇದು ರಸಪ್ರಶ್ನೆಯ ಆಟ ಕನ್ನಡವೆಂಬ ಮಹಾಸಾಗರದ ವಿಹಂಗಮ ನೋಟ  ಸುತ್ತಿನ ಸುಳಿಯೊಳಗೆ ಮುಳುಗಿ ಉತ್ತರಿಸದೆ ತಬ್ಬಿಬಾಗಿ  ಚಿತ್ರಕವನಗಳ ಸಾಲುಗಳ  ಉತ್ಸಾಹದಿಂದ  ಬೀಗಿ    ಸೋಲು ಗೆಲುವಿಗೂ ಮೀರಿದ ಅನುಭವ ವಿಶ್ವದಾದ್ಯಂತ ಬೀರಿತು  ಥಟ್ಟತೆ ಪ್ರಭಾವ

ಸೌದಾಮಿನಿ

ಇದ್ದರೆ ಕಮಲದಂತಿರಬೇಕು  ಕೆಸರಲ್ಲೂ ಕಂಗೊಳಿಸಬೇಕು   ಇಬ್ಬನಿಯ ಕಾಂತಿ ಇದ್ದರು ಅದು ಜಾರಿದರೆ  ದೇವರ ಪಾದ ಸೇರಬೇಕು  ಮುಟ್ಟಿದರೆ ಮುನಿಯಾಗದೆ  ಸಿಟ್ಟಿಗೆ ಅಣಿಯಾಗದೆ  ಸದ್ದಿಲ್ಲದೇ ಗದ್ದಲದ ನಡುವೆ  ದಟ್ಟ ಕಾರ್ಮೋಡದ ಮಧ್ಯೆ  ಮಿಂಚುವುದು ಸೌದಾಮಿನಿ  ಗುಡುಗಿನಕಿಂತ ಮಿಂಚಿನ ವೇಗವೇ  ಹೆಚ್ಚು ಎಂದು ತಿಳಿದಿರಬೇಕು

Environ(Mental) day ವಿಶ್ವ ಪರಿಸರ ದಿನ

ಈ ದಿನದ ಪ್ರಯುಕ್ತ ಜಗತ್ತಿನ್ನೆಲ್ಲೆಡೆ ಪರಿಸರದ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಗಿಡ ನೆಡುವುದು, ಪರಿಸರವನ್ನು ಸಂರಕ್ಷಿಸುವುದರ ಬಗ್ಗೆ ಮಾಹಿತಿ, ಸಂಗೀತ ನೃತ್ಯದ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುವುದು ಹೀಗೆ ಹತ್ತು ಹಲವು ಬಗೆಯಲ್ಲಿ ಈಗ ವೈಯಕ್ತಿಕ ಹಾಗು ಸಂಘ ಸಂಸ್ಥೆಗಳು ಪರಿಸರವನ್ನು ಉಳಿಸಲು ಹಾಗು ಬೆಳಿಸಲು ನಿಸ್ಸ್ವಾರ್ಥವಾಗಿ ತೊಡಗಿದ್ದಾರೆ. ಪರಿಸರ ಅಂದರೆ ಏನು? ಎಲ್ಲರು ತಿಳಿದಿರುವಂತೆ ನಮ್ಮ ಸುತ್ತಮುತ್ತಲಿನ ಪ್ರದೇಶ.ಗಿಡ ಮರಗಳು,ನದಿ ,ಭೂಮಿ ,ಆಕಾಶ ಮತ್ತು ಪಕ್ಷಿ ಪ್ರಾಣಿ  ಹೀಗೆ ನಮ್ಮನ್ನು ಆವೃತವಾದ ನೈಸರ್ಗಿಕ ಸಜೀವ ನಿರ್ಜೀವ ಅಂಶಗಳು. ಶಬ್ದಕೋಶದಲ್ಲಿರುವ ಹಲವಾರು ವ್ಯಾಖ್ಯಾನಗಳಲ್ಲಿ ಒಂದಾದ '' ಒಬ್ಬ ವ್ಯಕ್ತಿ, ಪ್ರಾಣಿ, ಅಥವಾ ಸಸ್ಯ ವಾಸಿಸುವ ಅಥವಾ ಕಾರ್ಯನಿರ್ವಹಿಸುವ ಸುತ್ತಮುತ್ತಲಿನ ಅಥವಾ ಪರಿಸ್ಥಿತಿಗಳು.'' ಪರಿಸ್ಥಿತಿಗಳು ಅಂದರೆ ಭೌತಿಕ ಹಾಗು ಅಸ್ಪೃಶ್ಯ ಸ್ಥಿತಿಗಳು ಹೊರಗಿನ ಅಥವಾ ಆಂತರಿಕ. ಹೊರಗಿನ ವಾತಾವರಣವನ್ನು ಶುದ್ಧವಾಗಿಡಲು ನಾವೆಲ್ಲರೂ ಸಾಕಷ್ಟು ಪಯತ್ನ ಪಡುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ನಮ್ಮ ಮನೆಯನ್ನು ಹಾಗು ಸುತ್ತಮುತ್ತಲಿನ ಆವರಣವನ್ನು ತಕ್ಕಮಟ್ಟಿಗೆ ಸ್ವಚ್ಛ್ವಾಗಿ ಇಡಲು ಕಷ್ಟಪದಿತ್ತುದೇವೆ. ಆದರೆ ಮನುಷ್ಯನ ಮನಃಸ್ಥಿತಿಯು ಈ ಪರಿಸರದ ವ್ಯಾಖ್ಯಾನದಲ್ಲಿ ಸೇರುತ್ತದೆಯೋ ಎಂಬ ಪ್ರಶ್ನೆ ನನ್ನದು? ನಮ್ಮ  ಭೌತಿಕ, ಸ್ಪೃಷ್ಜ್ಯ ವ...

ಕಲಾತ್ಮಕ ಸ್ಪರ್ಶ

ಇಮೇಜ್
ಚಿತ್ರಕಲೆಯಲ್ಲಿ ನನಗೆ ಚಿಕ್ಕಂದಿನಿಂದಲೂ ಆಸಕ್ತಿ. ಆದರೆ ಆಗ ಅದರ ಬಗ್ಗೆ ಅಷ್ಟು ಗಮನ ಕೊಡಲಿಲ್ಲ. ವಿದ್ಯಾಭ್ಯಾಸದ ಬಗ್ಗೆ ನಮ್ಮ ಎಲ್ಲಾ ಶ್ರಮ. ಮನೆಯನ್ನು ಅಚ್ಚುಕಟ್ಟಾಗಿ ಇಡುವುದು, ಒಳಾಂಗಣ ಗಿಡಗಳನ್ನು ಬೆಳೆಸುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ. ನಿಜ ಹೇಳ್ಬೇಕು ಅಂದ್ರೆ ಹವ್ಯಾಸಕ್ಕಿಂತಲೂ ಹೆಚ್ಚು. ಮನೆಯ ಪೀಠೋಪಕರಣಗಳ ಜಾಗ ಬದಲಾಯಿಸುವುದು  ಹಾಗು ಇನ್ನಿತರ ಕಲಾತ್ಮಕ ವಸ್ತುಗಳನ್ನು ಮನ ಬಂದಂತೆ ಆಗಾಗ ಸ್ಥಳಾಂತರ ಮಾಡುವುದು ನನ್ನ ಚಟ .. ಆಗ  ನನ್ನ ತಂದೆ ತಾಯಿ ಆಗಲಿ ,ಈಗ ನನ್ನ ಪತಿ ಆಗಲಿ ಯಾವ ಆಕ್ಷೇಪಣೆ ಮಾಡುವುದಿಲ್ಲ. ಈಗ ಮತ್ತೆ ಆಹಳೆಯ ಸ್ಥಗಿತಗೊಳಿಸಿದ ಕಲೆಯನ್ನು ಪುನರುಜ್ಜೀವನ ಮಾಡಲು ಪ್ರಾರಂಬಿಸಿದ್ದೀನಿ. ಕಳೆದ ವರ್ಷ ಅಂದ್ರೆ ೨೦೧೯ನಲ್ಲಿ ವರ್ಲಿ ಚಿತ್ರಕಲೆಯಿಂದ ಶುರು ಮಾಡಿ ಈಗ ಮಧುಬನಿಯ ತನಕ ಬಂದಿದ್ದೀನಿ .. ಭಾರತೀಯ ಎಂದೆನಿಸಿಕೊಳ್ಳಲು ಮತ್ತೊಂದು ಹೆಮ್ಮೆಯ ಅವಕಾಶ.

ಚಿಗುರೊಡೆದಾಗ

ಇಮೇಜ್
ಈ ನನ್ನ ಬ್ಲಾಗ್ ಕೇವಲ ನನ್ನ ಬರಹಗಳಿಗೆ ಮಾತ್ರ ಸೀಮಿತ ಮಾಡೋಣ ಅಂತ ಶುರುಮಾಡಿದ್ದೆ ಆದ್ರೆ ಈಗ ಕಳೆದ ೨ ತಿಂಗಳಿಂದ ಜೀವನದ ಗತಿಯು ಬದಲಾದ ಕಾರಣ ನನ್ನ ಹವ್ಯಾಸಗಳು ಕೇವಲ ನನ್ನ ಬರಹಕ್ಕೆ  ಮೀಸಲಾಗಿರಲಿಲ್ಲ. ಮಕ್ಕಳೊಂದಿಗೆ ಕೆಲವು ಚಟುವಟಿಕೆಗಳು, ಅವರೊಂದಿಗೆ ಹೆಚ್ಚು ಸಮಯ ಕಳೆಯುವರಿಂದ ಬರೆಯುವ ಆಸಕ್ತಿ ಇದ್ದರೂ, ಅದಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರೊಟ್ಟಿಗೆ ಮಾಡುವ ಕೆಲವು ಪೂರ್ವ ನಿರ್ಧಾರಿತ ಚಟುವಟಿಕೆಗಳು ಇಲ್ಲಿ  ಹಂಚಿಕೊಳ್ಳುತ್ತಿದ್ದೇನೆ. ಆ ಕೆಲವು ದಿನಗಳು ಒಳ್ಳೆಯ ಬಿಸಿಲು. ಹೀಗಿರುವಾಗ ಮಣ್ಣು ನೀರಿನ ಅಭಾವವಿಲ್ಲದ ಈ ದೇಶದಲ್ಲಿ, ವಸಂತ ಕಾಲದಿಂದ ಬೇಸಿಗೆಯ ತನಕ ಒಳ್ಳೆಯ ಕೈತೋಟ ಮಾಡಬಹುದು.ಎಲ್ಲರು ಮಾಡುವಂತೆ ನಾವು ಕೂಡ ಮನೆಯ ಹಿತ್ತಲಿನ ಅಂಗಳದಲ್ಲಿ ತೋಟಗಾರಿಕೆ ಶುರು ಮಾಡಿದ್ವಿ.ಗಿಡಮೂಲಿಕೆ ಗುಂಪಿಗೆ ಬರುವ ಮೆಂತ್ಯೆ , ಕೊತ್ತಂಬರಿ,ಪುದಿನ ಹಾಗು ಸಾಸಿವೆ. ತರಕಾರಿಗಳಾದ ಟೊಮೇಟೊ ಹಾಗು ಗಜ್ಜರಿ ಬೆಳೆಸಲು ನಿರ್ಧರಿಸಿ,ಅದಕ್ಕೆ ತಕ್ಕಂತೆ ತಯ್ಯಾರಿ ಮಾಡಿ-  ಮಕ್ಕಳಿಗೆ ಹೇಳಿದ ಮರು ನಿಮಿಷವೇ , ಅವರಲ್ಲಿನ ಹುರುಪು  ವರ್ಣಿಸಲಸಾಧ್ಯ ಮಣ್ಣು, ನೀರು ಮತ್ತು ಬಯಲು ನೋಡಿದರೆ ಎಲ್ಲರು ಮಕ್ಕಳಾಗುವರು. ಈವೆಲದಕ್ಕು ಪೂರಕವಾಗುವಂತಹ ವಾತಾವರಣ. ಇವುಗಳ ಸ್ಥಿರ ಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತಿದ್ದೀನಿ. ಕಳೆ ಕೀಳುವುದರಿಂದ ಹಿಡಿದು, ಮಣ್ಣುನ್ನು ಸಮ ಮ...

ಯಶಸ್ಸಿನ ಉಡುಗೊರೆ

ನನ್ನ ೩೭ ನೇ ಹುಟ್ಟುಹಬ್ಬ ಅಂದರೆ ೩೭ ಮುಗಿತು ೩೮ಕ್ಕೆ ಮುನ್ನಡೆತ್ತಿದಿನೋ ಅಥವಾ ತೆವಳುತ್ತಿದಿನೋ  ಅಥವಾ ನುಗ್ಗತಾಇದೀನೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮಯ ಮಾತ್ರ ಮಿಂಚಿನ ಗತಿಯಲ್ಲಿ ಚಲಿಸುತ್ತಿದೆ. ನನ್ನ ೧೫ನೆ ಹುಟ್ಟುಹಬ್ಬದಂದು ನನ್ನ ಭವಿಷ್ಯದ ಬಗ್ಗೆ ಕನಸು ಏನಿತ್ತೋ ಎನ್ನುವುದು ಈಗ ನೆನಪಿಸಿಕೊಂಡರೆ ನಗುಬರುವುದಲ್ಲೆದೆ ನಾನು ಬೆಳಸಿಕೊಳ್ಳುವ ವ್ಯಕ್ತಿತ್ವದ ಬಗ್ಗೆ ಒಂದು ರೀತಿ ವಿಚಿತ್ರವೆನಿಸುತ್ತದೆ. ನಮ್ಮ ಜೀವದಲ್ಲಿ ಸ್ನೇಹೋತರ  ಸಂಬಂಧಿಕರ ಮಹತ್ವ ಎಷ್ಟು ಮುಖ್ಯ ಎಂದು ಎಲ್ಲರಿಗೆ ತಿಳಿದಿದೆ. ಪ್ರಾಯದಲ್ಲಿ ನನ್ನ ಸ್ನೇಹಿತೆಯರ ದೊಡ್ಡ ಮನೆ, ಕಾರು ಎಲ್ಲವನ್ನು ನೋಡಿ ಸಹಜವಾಗಿ ಪ್ರಭಾವಿತಳಾಗಿ ನಾನು, ಭವಿಷ್ಯದಲ್ಲಿ ಒಳ್ಳೆಯ ನೌಕರಿ ಹಿಡಿದು ಭೌತಿಕ ಐಷಾರಾಮಿನ ವಸ್ತುಗಳಿಂದ ಆರಾಮಾಗಿ ಜೀವನ ನಡೆಸುವ ಕನಸನ್ನು ಕಂಡಿದ್ದೆ.ಅದಕ್ಕೆ ತಕ್ಕಂತೆ ಸಾಕಷ್ಟು ಕಷ್ಟು ಪಟ್ಟು ನನ್ನ ವಿದ್ಯಾಭ್ಯಾಸ ಮುಗಿಸಿ ಈಗ ಆ ವಸ್ತುಗಳೆಲ್ಲ ನನ್ನ ಹತ್ತಿರ ಇದ್ದರೂ ಅದರಮೇಲಿನ ಮೋಹವು ಕಡಿಮೆ ಆಗಿದಿಯೋ ಅಥವಾ ಅವುಗಳ ಮಹತ್ವವು ತಿಳಿದಿದೆಯೋ,ಅವುಗಳ ಸ್ವಾಮ್ಯದಿಂದ ಹೆಮ್ಮೆಯೇನು ಆಗುತ್ತಿಲ್ಲ. ೩೮ನೆ ವಯಸ್ಸಿನಲ್ಲಿ ಮನವರಿಕೆಯಾದ ಹುಟ್ಟುಹಬ್ಬದ ಉಡುಗೊರೆ ಅರ್ಥ. ಈಗ ನಾನು ಪ್ರಭಾವಿತಳಾದರೆ ಅದು ಒಬ್ಬರಲ್ಲಿ ಇರುವ ಒಳ್ಳೆಯ ಗುಣ, ಒಬ್ಬ ಯೋಗಿ , ಒಬ್ಬ ಧ್ಯಾನಿ , ಸಭ್ಯ ಗುಣವುಳ್ಳ ಮಕ್ಕಳ ತಂದೆ ತಾಯಿ ,ಅನನ್ಯ ಕಲೆಯಿರುವ ವ್ಯಕ್ತಿ , ಕಠಿಣ ಪರಿಶ್ರಮದಿಂದ ವ...