ಪೋಸ್ಟ್‌ಗಳು

ತಳಮಳ

 ಹೊಸ ವರ್ಷದ ಹಾದಿ ಪ್ರತಿ ವರ್ಷಾಂತ್ಯದಲ್ಲಿ ನೋಡುತ್ತಿದ್ದೆ  ಕಳೆದ ವರ್ಷದ ಪ್ರತಿ ತಿಂಗಳ ಅಮೋಘ ಕ್ಷಣಗಳನ್ನು  ದುಗುಡ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿದ್ದೆ  ಫೋನಿನಲ್ಲಿದ್ದ ಹನ್ನೆರಡು ತಿಂಗಳ ಫೋಟೋಗಳನ್ನು ನೋಡುತ್ತಿದ್ದೆ  ಮಕ್ಕಳ ಬೆಳೆವಣಿಗೆ ನೋಡಿ ನಿಶ್ಚಲತೆಯ ಮುಗುಳ್ನಗುವಿನಿಂದ ಸಮಯಕ್ಕೆ ಇಲ್ಲೇ ಸ್ತಬ್ದವಾಗಲು ಕೋರುತ್ತಿದ್ದೆ  ದಶಕದ ಕೊನೆಯ ವರುಷದ ಆರಂಭದಲ್ಲಿದ್ದೆ   ಮುಂದಿನ ದಿನಗಳ ಕಲ್ಪನೆಯು ಇಲ್ಲದ  ವರ್ಷಾರಂಭದಲ್ಲಿ  ಕನಸಲ್ಲೇನೋ ನೋಡಿದ್ದೇ  ಮಗಳ ಹುಟ್ಟು ಹಬ್ಬದ ತಯ್ಯಾರಿಯಲ್ಲಿದೆ ಪಾರ್ಟಿ ಪಿಕ್ನಿಕ್ ಗಳ ಯೋಜನೆ ಸಂಭ್ರಮ  ಬೇಸಿಗೆಯ ರಜೆಯಲ್ಲಿ ದೂರ ದೇಶದ ಕನಸು ಕಾಣುತ್ತಿದ್ದೆ  ದಿನ ಕಳೆದಂತೆ ಉಸಿರಾಡುವ ಗಾಳಿಯು ವಿಷವಾಗುತ್ತಿದೆ  ಪ್ರಪಂಚವನ್ನೇ ಆವರಿಸಿದ ರೋಗದಿಂದ ಕಣ್ಣ ಮುಂದೆ ಕತ್ತಲಾಗಿ  ಸಂಭ್ರಮ ಸಡಗರಗಳ  ವಾಸ್ತವಿಕತೆ  ದೂರವಾಗುತ್ತಿದೆ  ಹೀಗೆ ದಿನಗಳ ಕಳೆದು ವರ್ಷದ ಅಂತ್ಯ ಸಮೀಪಿಸುತ್ತಿದ್ದೆ ಮುಂದೇನು ಮುಂದೇನು ಅನ್ನುವ  ಪ್ರಶ್ನೆಯಿಂದ  ಅಸಮಾಧಾನದಿಂದ ಸಹನೆ ಭರವಸೆ ಕುಗ್ಗುತ್ತಿದೆ  ಸ್ನೇಹಿತರ ಭೇಟಿ ಇಲ್ಲದೆ ಬಂಧನದ ಅರಿವಾಗುತ್ತಿದೆ  ಮಕ್ಕಳ ಅಮ್ಮ ಅಪ್ಪನ ಸಹನೆಯ ದೀಪಕ್ಕೆ  ಎಣ್ಣೆ ಹಾಕಿದರು ಬತ್ತಿ ಸುಟ್ಟುಹೋಗುತ್ತಿದೆ  ಸಾಧಿಸಿದ್ದೇನು ಈ ವರುಷ ಎಂದೆನಿಸುತ್ತಿದೆ...

ಅಡಿಗೆ ಕ್ಲಾಕಾರ

 ಅಡಿಗೆ,ಅಡಿಗೆಮನೆಯಲ್ಲಿ ಏನಾದರು ಪ್ರಯೋಗ, ಪ್ರಯತ್ನಗಳು ಸದಾ ನಡೀತಾನೇ ಇರತ್ತೆ. ಅಮ್ಮನ ಅಪ್ಪನ ನೋಡಿ ಕಲಿತು ಅಡಿಗೆ ಮಾಡೋದು ಶುರು ಮಾಡ್ತೀವಿ. ಸಂಪೂರ್ಣವಾಗಿ ನಮ್ಮೆಲ್ ಜವಾಬ್ದಾರಿ ಬಿದ್ದಾಗ ನಾವು ಕೆಲವೊಮ್ಮೆ overconfidence ನಿಂದ ಅಡಿಗೆ ಮಾಡ್ಲಿಕ್ಕೆ ಹೋಗಿ ಮುಖಭಂಗ ಆಗಿದಿದ್ದೆ. ಈ ದೇಶಕ್ಕೆ ಬಂದ ಮೇಲೆ  ನನ್ನ ಒಂದೆರಡು ಅನುಭವಗಳನ್ನು  ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಛಾ!  ಎಲ್ಲಿಂದ ಬಂದ್ರು ಮದ್ಲ ನಮಗ ಛಾ ಬೇಕ್ ನೋಡ್ರಿ. ಏರ್ಪೋರ್ಟ್ ಇಂದ ಮನಿಗೆ ಬಂದು ಛಾ ಮಾಡೋಣ ಅಂತ ಹೋದ್ರ ..electric hot plate ವಲಿ.  ಎಲ್ಲೋ ನೋಡಿದ್ದೇ ಅದ್ರ ಎಂದು ಅಡಿಗಿ ಮಾಡಿಲ್ಲ. ಆತ್ ..ಇನ್ ಅದ ಪಜೀತಿ ಅಂತ ಒಂದರ ಮ್ಯಾಲೆ ನೀರಿಟ್ಟೆ ಮತ್ತೊಂದರ ಮ್ಯಾಲೆ ಹಾಲು. ಈಗ ಮರಳ್ತದ ಆಗ್ ಮರಳ್ತದ ಸಕ್ಕರಿ ಛಾಪುಡಿ ಹಾಕೋಣಂತ ನಾನು ಕಾದೆ,ಕಡೀಕು ಛಾ ಆತ,. ಈಕಡೆ ಹಾಲು ಇನ್ನು ಕುದಿಬೇಕಿತ್ತು. ನನಗೇನ್ ಗೊತ್ತ,ಉಕ್ಕಿ ಬಂದ್ಕೂಡ್ಲೇ ವಲಿ ಆರ್ಸಿದೆ. ಆದರೂ ಏನದು ಪ್ರವಾಹಧಾಂಗ ಉಕ್ಕಿ ಹರಿದು ಪೂರ್ತಿ ವಲಿಯಲ್ಲ ಕ್ಷೀರ ಸಾಗರ. ಅಷ್ಟೇ ಅಲ್ಲ ,ಆ ಶಾಖಕ್ಕ ಪಟ್ಟನೆ ಹಾಲೆಲ್ಲ ಹೊತ್ತ್ಹೋತು. ಆ ಕಡೆಯಿಂದ ಅಯ್ಯೋ ಇದರಮ್ಯಾಲೆ ಅಡಗಿ ಸ್ವಲ್ಪು ನೋಡೋಂಕು ಮಾಡ್ಬೇಕ ಅಂತ ಆಕಾಶವಾಣಿ ಬಂತು. ನಮಗ ಕುದ್ದಿದ್ ಹಾಲಿನ ಛಾ ನೇ  ರುಚಿ. ಇಲ್ಲೇ  ಮಂದಿ ಹಾಲು ಕಾಯಿಸುದಿಲ್ಲ ಅಂತ! ಆಮ್ಯಾಲೆ ತಿಳೀತು. ಕಡಿಕೆ ಡಿಕಾಕ್ಷನ್ಗೆ ಹಸಿ ಹಾಲ್ ಹಾಕಿ ಛಾ ಕ...

Letter to my friend

Dear Radhika, Hope this letter finds you in good health. It's been a long time since I spoke with you. In this day and age we have forgotten to write letters instead we just pick up our phone and send two lines message or sometimes call the person who we miss badly.  As we all are trying to come to terms with the pandemic, which has taken the universe by storm but one thing which is still the same and has not affected one life is real human's nature (you would be thinking is it not human's real nature) or (some of you might be thinking what's the difference after all). I am saying this because who were real will still be compassionate to others' situation and try to lend a hand and few others still don't care and do what they want. My letter to you comes with the deepest of my emotions which I do not express over my text chats or phone calls. I am aware of your situation and as you read my letter you will already be overwhelmed with household and children's ...

ಮಲ್ಲಿಗೆಯ ಜಿಜ್ಞಾಸೆ

ಕನ್ನಡ ರಾಜ್ಯೋತ್ಸವದ  ಪ್ರಯುಕ್ತ ಬರೆದ ನನ್ನ ಕವನ, ಮೈಸೂರು ಮಲ್ಲಿಗೆಯ ಮನಮೋಹಕ ಸುಗಂಧ ಹಾಗು ವೈಶಿಷ್ಟ್ಯತೆ ಬಗ್ಗೆ ಇತ್ತು. ಈ ಕವನವನ್ನು ಕೇಳಿ ನಮ್ಮ ಗುಂಪಿನಲ್ಲಿರುವ ಪ್ರಬುದ್ಧ  ಬರಹಗಾರರು ಹಾಗು ಆದರದ ಸದಸ್ಯರು ಶ್ರೀ ಶ್ರೀವತ್ಸ ದೇಸಾಯಿ ಅವರು ತಮ್ಮ ಮೈಸೂರಿನ ಅನುಭವ ಹಾಗು 2013  ವರ್ಷದಲ್ಲಿ  ಭೇಟಿ ಕೊಟ್ಟಾಗ ಮೈಸೂರಿನ  ಪ್ರಸಿದ್ಧ  ದೇವರಾಜ ಮಾರುಕಟ್ಟೆ ಅಥವಾ ದೊಡ್ಡ ಮಾರ್ಕೆಟ್ ಅಂತಾನೆ ಕರೆಯಲ್ಪಡುವ ಮಾರ್ಕೆಟಿನ ವಿಡಿಯೋ ಮಾಡಿದ್ದಾರೆ. ಅದನ್ನು ನನ್ನ ಕೋರಿಕೆಯ ಮೇರೆಗೆ  ತಮ್ಮ ಅನಸಿಕೆಯನ್ನು ಕೂಡ ವಿಡಿಯೋ ಜೊತೆಯೇ ಹಂಚಿಕೊಂಡಿದ್ದಾರೆ. ದೇಸಾಯಿ ಸರ್ ತುಂಬಾ ಧನ್ಯವಾದಗಳು  Morning Scene in a flower market!  by Shrivatsa Desai I filmed this in 2013. It was my second visit to Devraj  Market in the centre of Mysuru.  Even though I had heard a lot about it from others, especially my wife's family, I was  fascinated on my very first visit and loved it. This time I was staying in Dasaprakash Hotel , a stone's throw  (should I say, a flower bloom's throw, as it is so near) from the market. The colours and smells were a feast to one's ey...

ಸ... ಪ... ಸ...

 ಸ... ಪ... ಸ...  ಮೈಸೂರು  ದಸರಾ  ಎಷ್ಟೊಂದು  ಸುಂದರ ....   ಎಂತಹ ಸುಂದರ ಹಾಡು ಅತ್ಯದ್ಭುತ ಮೈಸೂರಿನ ವರ್ಣನೆ. ದಸರಾ ಅಂದಕೂಡಲೇ ಮೈಸೂರಿನ ಅರಮನೆ,ಅಂಬಾರಿ ,ಚಾಮುಂಡಿ ಬೆಟ್ಟ ,ಆನೆಗಳು ,ನೃತ್ಯ ,ಸಂಗೀತ ,ಡೊಳ್ಳು ಕುಣಿತ ,ಸ್ತಬ್ದ ಚಿತ್ರಗಳ ಮೆರೆವಣಿಗೆ. ಇದನೆಲ್ಲಾ ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ.ಹುಟ್ಟಿದ್ದು ಮಾತ್ರ ಹುಬ್ಬಳ್ಳಿಯಲ್ಲಿ ಆದರೆ ಬಾಲ್ಯ ಹಾಗು ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿ.  ನಮ್ಮ ಮನೆಗೂ ಊರಿಂದ ನೆಂಟರು ಇಷ್ಟರು ಈ ಮಹೋತ್ಸವನ್ನು ನೋಡಲು ಬರುತ್ತುದ್ದರು.  ಮೈಸೂರಿನವರಿಗೆ ದಸರಾ ಕೇವಲ ೧೦ ದಿನದ ಉತ್ಸವವಲ್ಲ. ತಿಂಗಳ ಮುಂಚಿತವಾಗಿಯೇ ಉತ್ಸವದ ತ್ಯಯಾರಿ. ಒಂದೆಡೆ ಅಂಬಾರಿಯ ಆನೆಗಳು ನಗರಕ್ಕೆ ಬಂದಿಳಿದರೆ ಮತ್ತೊಂದೆಡೆ ಸಾಲು ಸಾಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ. ಮನೋರಂಜನೆಯ ಕಾರ್ಯಕ್ರಮಗಳು ಅತಿರಂಜಿತವಾದಾಗ ನಮ್ಮ ಮನ್ನಸಿನ ಮೇಲೆ ಪ್ರಭಾವ ಬೀರದೆ ಇರುವುದೇ. ನಾವು ಚಿಕ್ಕವರಿದ್ದಾಗ ನಮ್ಮ ಅದೃಷ್ಟವೇನೆಂದರೆ ಅರಮನೆಯ ದರ್ಬಾರಿನ ಸಭಾಂಗಣದಲ್ಲಿ ಕುಳಿತು ಸಂಗೀತ ಕಾರ್ಯಕ್ರಮವನ್ನು ಆನಂದಿಸುವ ಅವಕಾಶ. ಇದರ ಸಂಪೂರ್ಣ ಶ್ರೇಯ ನನ್ನ ತಂದೆ ತಾಯಿಗೆ ಸೇರಬೇಕು. ನನ್ನ ತಾಯಿ ತಪ್ಪದೆ ಗಾಯನ ,ಸಂಗೀತ ವಾದ್ಯಗಳ ಕಾರ್ಯಕ್ರಮಕ್ಕೆ  ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಅಕ್ಕಪಕ್ಕದ ಮನೆಯವರ ಜೊತೆಗೆ ಹೋದಾಗಂತೂ ನಾವೆಲ್ಲಾ ಮಕ್ಕಳ್ಳು ಗಾಯಕರ ,ವಿದ್ವ...

ಪವರ್ ಕಟ್

 ಕಳೆದ ವಾರದಿಂದ ನಮ್ಮಲ್ಲಿ ವಿದ್ಯುತ್ ಸರಬರಾಜಿನ ಅಡಚಣೆ ಆದ್ದರಿಂದ ನಮಗೆ ನಮ್ಮೋರು, ನಮ್ಮದ ದೇಶದ ನೆನಪು ಹಸಿರಾಗಿತು.ಪವರ್ಕಟ್ ಕೆಲನಿಮಿಷದಲ್ಲ ..ಮೊದಲನೆಯ ದಿನ ಸುಮಾರು ೭ ಘಂಟೆಗಳ ಕಾಲ  ಮತ್ತೆ ಎರಡನೇಯ ಬಾರಿಯು  ಸುಮಾರು ಅಷ್ಟೇ ಹೊತ್ತು. ಮೊದಲಸಲವಂತೂ ಸಂಜೆಯ ಹೊತ್ತು ೫ ಹೊಡೆದಿತ್ತು. ಇನ್ನು ಬೇಸಿಗೆಯ ಕಡೆಯ ದಿನಗಳು. ಹೀಗಾಗಿ ಸಂಜೆ ಸುಮಾರು ೭ರ ತನತ ಬೆಳೆಕಿರುವುದರಿಂದ ಮಕ್ಕಳು ಹೆಗೋ ಅಲ್ಲಿಯ ತನಕ ಹೊರಗೆ ಗಾರ್ಡನ್ ಪಾರ್ಕ್ ಅಂತ ಕಾಲ ಕಳಿದರು.ನಮಗೆ ಈ ಅನುಭವ ಮರೆತಂತಾಗಿತ್ತು.ಇನ್ನು ಎರಡು ವಾರಗಳು ಆಗಬಹುದು ಅಂದಿದಾರೆ .. ೧೦ ವರ್ಷಗಳಲ್ಲಿ  ಪವರ್ಕಟ್ ಆಗಿದ್ದರು ಕೆಲ ನಿಮಿಷಗಳು ಕಾಲ ಮಾತ್ರ. ನನ್ನ ಸುಮಾರು ಎಲ್ಲಾ ಲೇಖನಗಳಲ್ಲಿ ಪೀಳಿಗೆಯ ಬಗ್ಗೆ ಉಲ್ಲೇಖವಿರುತ್ತದೆ.ಈಗಲೂ ನನಗೆ ತೋಚಿದ್ದು ಅದೇ. ನಮ್ಮ ಕಾಲದಲ್ಲಿ ನಮ್ಮ ಊರಿನಲ್ಲಿ  ಪವರ್ ಕಟ್ ಬಹಳ ಸಾಮಾನ್ಯ. ಬೇಸಿಗೆ ಕಾಲದಲ್ಲಂತೂ ವಿದ್ಯುತ್ತಿನ ಅವಶ್ಯಕತೆ ಹೆಚ್ಚು, ಆಗಲೇ ಹೆಚ್ಚಿನ ಅಡಚಣೆ .ಮಾರ್ಚ್ ತಿಂಗಳಿನಲ್ಲಿ ನಮ್ಮೆಲ್ಲರ ಪರೀಕ್ಷೆ, ಎಲ್ಲರ ಪಾಡು ಈಗ ನೆನಸಿಕೊಂಡರೆ ನಗು ಬರುತ್ತದೆ. ಚಿಕ್ಕಂದಿನಲ್ಲಿ ಮೇಣಬತ್ತಿಗಳು, ನಂತರ ಪೆಟ್ರೋಮ್ಯಾಕ್ಸ್ , ಆಮೇಲೆ ಎಮರ್ಜೆನ್ಸಿ ಟುಬೆಲೈಟ್ಗಳು. ನಮ್ಮ ತಂದೆಯ ಡೈಲಾಗ್  ಮಾತ್ರ ವರ್ಷಾನು ವರ್ಷಗಳಿಂದ ಅದೇ .."ಬೆಳ್ಳಿಗ್ಗೆ ಬೇಗ ಏಳಬೇಕು ,ಹಿಂದಿನ ದಿನ ತುಂಬಾ ಓದುವುದು ಇಟ್ಟುಕೊಳ್ಳಬಾರದು,ಮುಂಚಿತವಾಗಿಯೇ ತಯ್ಯ...

ಬಾಲ್ಯದ ಬೆಳದಿಂಗಳು

 ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ. ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ. ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹ...