ಪೋಸ್ಟ್‌ಗಳು

ಗುಟ್ಟಾಟ ಹುಡುಗಾಟ ಕೊನೆಗೆ ಬೊಬ್ಬಾಟ

ಇಮೇಜ್
 ನಾಕಂಡಂತೆ  ಬರಿ ಬಣ್ಣ ಎರಚೋದು ಮತ್ತು ಹೆಣ್ಣು ಮಕ್ಕಳು ಬೀದಿಗಿಳಿದು ಬಣ್ಣ ಆಡುವ ಸ್ವತಂತ್ರ ಇರುವುದಿಲ್ಲ ಅಷ್ಟೇ ಅಲ್ವಾ ..?  ಬರೀ ಹುಡುಗರು ಆಡೋದನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಾ , ಮತ್ತೆ ಮತ್ತೆ ಅಮ್ಮನ ಕೇಳ್ತಿದ್ದೆ ನಾನ್ಯಾಕೆ ಬಣ್ಣ ಅಡೋಹಾಗಿಲ್ಲ? ಮನೆಯೊಳಗೇ ಯಾಕೆ ಬಣ್ಣ ಎರಚೋಹಾಗಿಲ್ಲ ? ಬರಿ ಪ್ರಶ್ನೆಗಳು. ಆಗ ನನ್ನ ತಂದೆ ಅವರ ಚಿಕ್ಕವರು ಇರುವಾಗ  ಏನೆಲ್ಲಾ ಕಿಡಿಗೇಡಿ ಕೆಲಸ ಮಾಡುತ್ತಿದ್ದರು ಅಂತ ಹೇಳ್ತಾ ಇದ್ದಾಗ, ನಾನು ಅಷ್ಟು ಶಿಸ್ತೀನಿ ಮನುಷ್ಯ ,ನಾವು ಕೆಟ್ಟ ಕೆಲಸ ಮಾಡಿದ್ರೆ ಬಯ್ಯುವ ತಂದೆ ತಾವು ಮಾಡಿದನ್ನು ಎಷ್ಟು ಹೆಮ್ಮೆಯಿಂದ ಹೆಲ್ಹೋಳ್ಳುತ್ತಿದರೆ ಅಂತಾ ಆಶ್ಚರ್ಯ ಪಟ್ಟಿದ್ದೆ.  ಶಿವರಾತ್ರಿ ನಂತರ ೭-೮ ವರ್ಷದಿಂದ ಹಿಡಿದು  ದೊಡ್ಡಹುಡುಗರು (ಬೀದಿ ಕಾಮಣ್ಣ ಅಂತಾ ಅಂತಾರೆ) ಮನೆ ಮನೆ ಹೋಗಿ ''ಕಾಮಣ್ಣ ಮಕ್ಳು ಬಂದೀವಿ, ಏನಾರ ಕೊಡ್ರಿ'' ಅಂತಾ ಕಿರುಚುತ್ತಾ , ಹಳೆ ಬಟ್ಟೆ , ಕಟ್ಟಿಗೆ,  ರದ್ದಿ ಎಲ್ಲವನ್ನು ಕಲೆಹಾಕಲು ಶುರು ಮಾಡುತ್ತಾರೆ. ಆ ಗುಂಪಿನಲ್ಲಿರುವ ಪುಟಾಣಿಗಳ ಕೆಲಸ ಯಾವ ಮನೆಯ ಹಿತ್ತಲಿನಲ್ಲಿ ಏನಾದ್ರು ಸಿಗುತ್ತಾ ಅಂತಾ ನೋಡಿ ಅದನ್ನು ಕಳ್ಳತನ ಮಾಡಿ, ಒಂದು ರಹಸ್ಯವಾದ ಜಾಗ ಹುಡುಕಿ ಎಲ್ಲ ವಸ್ತುಗಳನ್ನು ಅಲ್ಲಿ ಮುಚ್ಚಿಡುವುದು. ಈ ಪಿತೂರಿಯ ಮಜಾ ಏನೆಂದರೆ ಬೇಡಿ ಪಡೆಯೋಕಿಂತ ತುಡುಗು ಮಾಡುವುದರಲ್ಲಿರುವುದು. ನನ್ನ ತಂದೆ ಸೋದರಸಂಧಿಗಳೆಲ್ಲ ಚಿಕ್ಕವರಿದ್ದಾಗ ಇಂತಹ ಘನ...
 ಮುಗ್ಧತೆಯ ನಗುವನ್ನು  ಸ್ಥಬ್ಧ ಮಾಡುವ ತನಕ  ದಟ್ಟಗಾಲಿಡುವ  ಅವಳ ಕೈಹಿಡಿದು ಸಪ್ತಪದಿ ಇಡಿಸುವ ತನಕ  ಪುಟ್ಟಕಾಲಿನ ಗೆಜ್ಜೆಯ ಹೆಜ್ಜೆಯೊಂದಿಗೆ ಕಾಲುಂಗುರಿನ ತನಕ  ಶಾಲೆಯಲಿ ಗೆದ್ದ ಚಿನ್ನದ ಪದಕದಿಂದ ಮಾಂಗಲ್ಯದ ತನಕ  ಪುಸ್ತಕ ಲೇಖನಿ ಇಂದ ಸೌಟು ಕಸಬರಿಗೆ ತನಕ   ಲಂಗ ದಾವಣಿಯಿಂದ ಸೀರೆಯ ಉಡಿಸುವುದರ ತನಕ  ಬಾಲ್ಯದ ಪದ್ಯದಿಂದ ಮಮತೆಯ ಲಾಲಿಹಾಡಿನ ತನಕ  ಅಕ್ಕ ತಂಗಿಯಿಂದ ಪತ್ನಿ ತಾಯಿಯ ತನಕ  ಮಡಿವಂತಳಾಗುತ್ತಾಳೆ ಕೊನೆಯ ತನಕ 

ದಟ್ಟೆ ದಟ್ಟೆಯ ದಟ್ಟ ಕಾರ್ಮೋಡ

ದಟ್ಟಗಾಲಿಡುವ ಅವಳ ಕೈಹಿಡಿದು  ಹೆಜ್ಜೆಯನ್ನು ಇಡಿಸುವುದರಲ್ಲಿ ಆದ ಖುಷಿ  ಬೆಳೆಯುತ್ತಿದಂತೆ ಅವಳ ಪ್ರತಿ ಹೆಜ್ಜೆಯನ್ನು  ಹಿಂಬಾಲಿಸಿ ಆದ  ಕಸಿವಿಸಿ  ಆಡಲು ಬಲವಂತವಾಗಿ  ಜೋಡು ಮಾಡಿಸಿದ ಪುಟ್ಟ ಪುಟ್ಟಿಯರು  ದೊಡ್ಡವಳಾಗುತ್ತಾ ಸಂದೇಹದಿಂದ ಕಾಣುವ  ಅವಳ ಗೆಳೆಯರು  ಅವಳ ಕೈಹಿಡಿದು ಬರೆಸಿದ  ಮೊದಲನೆಯ ಅಕ್ಷರದ ಸಂತೋಷ  ಅವಳ ಉನ್ನತ ಅಧ್ಯಯನದ ತೀರ್ಮಾನದಿಂದಾದ  ಅತಿ ಕ್ಲೇಶ  ಹದಿ ವಯಸ್ಸಿನಲ್ಲಿ ಸ್ವತಂತ್ರವಾಗಿ ಶಾಲೆಗೆ ಹೋದಾಗ ಬೀಗಿದ ಮುಖ  ಹಾಸ್ಟೆಲಿನಲ್ಲಿ  ಇರುತ್ತೇನೆ ಎಂದಾಕ್ಷಣ ಎಲ್ಲರ  ಇಳಿ ಮುಖ  ಶಾಲೆಯಲ್ಲಿನ  ಉತ್ತಮ ಅಂಕಗಳು ಸಾಲಾಗಿ ಜೋಡಿಸಿದ ಪ್ರಶಸ್ತಿಗಳು  ಕಾಲೇಜಿನಲ್ಲಿ ಗೆದ್ದ ಸ್ಪರ್ಧೆಗಳು ಕೇವಲ ಹವ್ಯಾಸದ ವಸ್ತುಗಳು  ಸ್ವಂತವಾಗಿ ಸ್ವತಂತ್ರವಾಗಿ ದುಡಿಯಬೇಕೆಂದಾಗ ಎಲ್ಲರ ಪ್ರಶ್ನೆ  ಏಕೆ ಈ ಸ್ವಾತಂತ್ರ್ಯ ಸ್ವಚ್ಛಂದ ಬೀದಿ  ಜನರ ಕಣ್ಣಮೂಗಿನ ಸನ್ನೆ  ತಾಯಿಯ ಹಾಡಿಗೆ  ತೊದಲುತ್ತಾ ತಪ್ಪು ಹೆಜ್ಜೆಯಲ್ಲಿ  ಗೆಜ್ಜೆಯ ಸಪ್ಪಳದಿಂದ ನಲಿಯುತ್ತಾ ಆಗುವಳು ಇವಳು ಗಾಯಕಿ ನರ್ತಕಿ ಎಂಬ ಕನಸನ್ನು ಮನೆಯವರೆಲ್ಲರೂ ಕಾಣುತ್ತಾ ಸಮಾಜದ ಒತ್ತಡದ ರಾಗಕ್ಕೆ ಗಾಯಕಿಯಾಗಿ ಎಲ್ಲರ ತಾಳಕ್ಕೆ ನರ್ತಕಿಯಾಗಿ  ತನ್ನ ಉತ್ಸಾಹ ಆಸೆಗಳ ಸ್ವಂತತನವನ್ನು ಕಳೆದುಕೊಂಡವಳಾಗಿ  ******************...

ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು

ಇಮೇಜ್
ಜೀವನಲ್ಲಿ ಸುಖ ದುಃಖದ ಸಮಯ ಋತುಗಳಂತೆ  ಬಿಸಿಲಿನ ಬೇಗೆಯಲಿ ತಂಗಾಳಿ ಬಯಸುವಂತೆ   ಛಳಿಯ ತಂಪಿನಲ್ಲಿ ಬಿಸಿಲನ್ನು ಆಶಿಸುವಂತೆ   ಮನುಷ್ಯನ ಗುಣ ಇಲ್ಲದ್ದನ್ನು ಬೇಕುನ್ನಿವಂತೆ   ಸಿಕ್ಕಾಗ ಅನುಭವಿಸಲು ಸಾಧ್ಯವಾಗಂತೆ     ಚಳಿ ಮಳೆಯಲ್ಲಿ  ಬೆಚ್ಚನೆಯ  ಸೂರಿನ ಕೆಳಗೆ  ಬಿಸಿಲಲ್ಲಿ ಅಂಗಳದ ಗಿಡಮರಗಳ ತಂಗಾಳಿಗೆ  ಐಷಾರಾಮಿಗೆ ಒಗ್ಗಿದ ಈ ಬದುಕಿಗೆ  ಇನ್ನಿಷ್ಟು ಮತ್ತಿಷ್ಟು ಬೇಕೆಂಬ ಹರಕೆಗೆ  ಬೇಕೆನ್ನುವುದನ್ನೆಲ್ಲ ಸಂಗ್ರಹಿಸಿ ಶೇಖರಿಸಿದಂತೆ   ವಸ್ತುಗಳಿಗೆ ಭಾವನೆಯ ಹಗ್ಗ ಕಟ್ಟಿದಂತೆ  ಮತ್ತೊಬ್ಬರ ನೋವಿಗೆ ಸ್ಪಂದಿಸದಂತೆ ಬೇಕು ಬೇಡಗಳ ಬೇಧ ತಿಳಿಯದಂತೆ  ಸ್ಥಿತ ಪ್ರಜ್ಞನಾಗಿ ಮೈಮರೆತಂತೆ  ಪ್ರಕೃತಿಯ ನೈಜ ರೂಪ ಬದಲಾಗಿ  ಜೀವನದ ಸಮತೋಲನ ಏರುಪೇರಾಗಿ  ಸಮರ್ಥ ಅಶಕ್ತರ ನಡುವಿನ ಬೇಧ ತಿಳಿದಾಗ  ಸ್ಥಿತಿಯ ಪ್ರಜ್ಞೆ ಮರುಕಳಿಸಿದಾಗ  ಭೂತಗಳಿಂದ ಮುಕ್ತವಾಗಲು  ಬುದ್ಧನಲ್ಲದಿದ್ದರು ಪ್ರಭುದ್ಧನಾಗಬಹುದು 

ರಾಜಸ್ಥಾನಿ ಚಿತ್ರಕಲೆ "ಪಿಚ್ಚವಾಯಿ"

ಇಮೇಜ್
ನಮ್ಮ ವಿಶಾಲ ದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚೈತನ್ಯವನ್ನು ಕಲೆ ಮತ್ತು ವಿವಿಧ ರೀತಿಯ ಕರಕುಶಲ ವಸ್ತುಗಳು ಮೂಲಕವೂ ಚಿತ್ರಿಸಲಾಗುತ್ತದೆ.ಪುರಾಣದ ಸನ್ನಿವೇಶಗಳನ್ನು ಹಾಗು ನಂಬಿಕೆ, ಭಕ್ತಿ ,ಶ್ರದ್ದೆ ,ಜೀವನ ಶೈಲಿ ಎಲ್ಲವು  ಚಿತ್ರಗಳ ,ಬಣ್ಣಗಳ  ಹಾಗು  ಕಥೆಗಳ ಮೂಲಕ ಜನರಿಂದ ಜನಕ್ಕೆ ,ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಲಾಗುತ್ತದೆ. ಜಾನಪದ ಹಾಡುಗಳು ಬಾಯಿಂದ ಬಾಯಿಗೆ ತಲಪುವಂತೆ, ಜಾನಪದ ಚಿತ್ರಕಲೆ ಹಾಗು ಬುಡಕಟ್ಟು ಜನಾಂಗದ ಕಲೆಗಳು ಕೈಯಿಂದ ಕೈಯಿಗೆ ಸಂಚರಿಸಿ ವಿವಿದೆಡೆ ಹರಡುತ್ತದೆ. ಕೆಲ ಬಾರಿ ಸಾಂಪ್ರದಾಯಿಕ ಚಿತ್ರಕಲೆಗಳ ಬಣ್ಣ ಹಾಗು ಮತ್ತಿತರ ಸಾಮಗ್ರಿಗಳ ಎಲ್ಲೆಡೆ ಸಿಗದ ಕಾರಣ, ಸಂಶ್ಲೇಷಿತ ವಸ್ತುಗಳ ಉಪಯೊಗವಾಗಿತ್ತಿವೆ.  ನಮ್ಮ ದೈತ್ಯ ರಾಷ್ಟ್ರದ  ಉದ್ದಗಲಕ್ಕೂ, ಪ್ರತಿ ಪ್ರದೇಶದಲ್ಲೂ ಅದರದೇ ಆದ ಜಾನಪದ ಮತ್ತು ಬುಡಕಟ್ಟು ಸಮುದಾಯದ ಕಲೆ ವೈಶಿಷ್ಟ್ಯತೆ ಇರುವುದು ಒಂದು ಅದ್ಭುತವೇ . ಭಾಷೆಯೇ ಶ್ರೀಮಂತಿಕೆ ಇದ್ದರು ಒಮ್ಮೊಮ್ಮೆ ಅದು ಜನರ ಜೀವನ  ಶೈಲಿಯನ್ನು ಹೊರದೇಶಕ್ಕೆ ತಲುಪಿಸುವುದರಲ್ಲಿ ಸಫಲವಾದರೂ ಜನರ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ  ಸಾಫಲ್ಯತೆ ಪಡೆಯದಿರಬಹುದು .ಏಕೆಂದರೆ ಅದರ  ಅನುವಾದವಾಗಬೇಕು. ಆದರೆ ಚಿತ್ರಕಲೆ, ಸಂಗೀತ ,ನೃತ್ಯ ಇವುಗಳಿಗೆ ಭಾಷೆಯ ತಡೆಗೋಡೆ ಇಲ್ಲ. ಯಾರು ಬೇಕಾದರೂ ನೋಡಿ ಆನಂದಿಸಿ ಪ್ರೋತ್ಸಾಹಿಸಬಹುದು.  ಕೆಲವು ದಶಕಗಳ ಹಿಂದೆ ಕೇವಲ ಸಿನೆಮಾ ...

ಸಮಯ ವ್ಯರ್ಥವೇ?

ಕ್ಷಣ ಕ್ಷಣವೂ ಬಯಕೆಗಳ ಕನಸು ಕಾಣುತ್ತಾ  ಮರು ಕ್ಷಣವೇ  ನನಸು ಭಾಸವಾಗುತ್ತಾ  ಬಯಸಿದ್ದು ಪಡೆಯುವುದರಲ್ಲಿ ಇದ್ದದ್ದು ಕಳೆದುಕೊಳ್ಳುವುದರಲ್ಲಿ ಸಮಯ ವ್ಯರ್ಥವೇ?  ಆಸೆಗಳ ಜಲಪಾತದಿಂದ ಹತಾಶೆಗಳ ಪ್ರಪಾತದಲ್ಲಿ  ಮುಳುಗಿದಾಗ ಅಗೋಚರ ಮನಸ್ಸು ಏನನ್ನು ಹುಡುಕುತ್ತಿದೆ  ನೆಮ್ಮದಿಯೇ ಸಹಚರ ಅಲ್ಲವೇ ? ವಾಸ್ತವಿಕತೆಯ ಕನಸುಕಾಣುವುದರಲ್ಲಿ  ಸಮಯ ವ್ಯರ್ಥವೇ ? ಗಳಿಸಿದ್ದನ್ನು ಚಿತ್ರಿಸಿ ಸೋತದ್ದನ್ನು ಅಲಕ್ಷಿಸಿ  ಬಂದಿದ್ದನ್ನು  ಆನಂದಿಸಿ ಹೋಗಿದ್ದನ್ನು ಮರೆಸಿ  ಇರುವುದನ್ನು ಅನುಭವಿಸಿ ಸಮಯ ಸಾಧಿಸುವಲ್ಲಿ  ಸಮಯ ವ್ಯರ್ಥವೇ ? ಮುಂದೆ ಬರುವ ಹಾದಿ ನೋಡುತ್ತಾ ಕಳೆದು ಹೋದದನ್ನ ಚಿಂತಿಸುತ್ತಾ    ವರ್ತಮಾನದ ಪ್ರಸ್ತುತಿಯನ್ನು ಕಡೆಗಣಿಸಿ ಜೀವ ಹೋಗುವ ಕಾಲ ಬಂದಂತೆ  ಎಲ್ಲವು ನಿಶಬ್ದವಾದಾಗ ಉಳಿವುದು ಕೇವಲ ಉತ್ಕಂಠತೆ ಈಗೂ ಸಮಯ ವ್ಯರ್ಥವೇ ? ಬಿಟ್ಟು ಹೋಗಿದ್ದು ಹೋಗುವುದು ಇದ್ದದ್ದು  ಉಳಿಯುವುದು  ತಣಿದ ಜೀವ ಕಳೆವುದು ನೆನಪುಗಳು ಮಾತ್ರ  ಬದುಕಿಸುವುದು  ಸಾಧಿಸ ಹೊರಟಿದ್ದು ಕೇವಲ  ಪ್ರಾಪಂಚಿಕ  ಆದರೆ ಸ್ನೇಹ ಸಹನೆಯ ಸಂಪಾದನೆಯಲ್ಲಿ ಸಮಯ ವ್ಯರ್ಥವೇ ?

ಸಿರಿಗಂಧವೋ ಗಂಧರ್ವಲೋಕವೋ

ಇಮೇಜ್
 ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ನಾಡೊ ನುಡಿಯೋ ತಿಳಿಯದು ಸಾವಿರಾರು ವರ್ಷಗಳ ಇತಿಹಾಸದ  ಬಗ್ಗೆಯೋ  ಆಧುನಿಕತೆಯ ಕೇಂದ್ರವೋ, ಸಂಪ್ರದಾಯದ ಬಿಂದುವೋ ಯಾವುದು ತಿಳಿಯದು ?! ನಾಡಿನ ಉದ್ದಗಲಕ್ಕೂ ವಿವಿಧ ಕಲೆ ,ಸಂಸ್ಕೃತಿ ಹಾಗು  ಸಂಗೀತದ ಅಲೆ  ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ಪ್ರಕೃತಿಯ ಸೌಂದರ್ಯ ಬಣ್ಣಿಸಲೋ ವೈವಿಧ್ಯತೆಯಲ್ಲಿರುವ  ಸೌಹಾರ್ದತೆಯನ್ನೋ    ಕೊಡಗಿನ ಬೆಡಗು ಯಕ್ಷಗಾನದ ಮೆರಗು  ಜಲಪಾತಗಳ ಸೊಬಗು  ಹೇಗೆ ವಿವರಿಸಲಿ ? ನನಗೆ ತಿಳಿಯದು?!    ನಯನ ಮನೋಹರ ಪಶ್ಚಿಮ ಘಟ್ಟಕ್ಕೆ ಅಪ್ಪುವ ಸಮುದ್ರದ ಅಲೆಗಳೋ   ಗುಡಿ ಗೋಪುರಗಳಿಂದ ಶೋಭಿಸುವ ಹಳೇಬೀಡು ಬೇಲುರೋ  ವಾಸ್ತುಶಿಲ್ಪಅದ್ಭುತಗಳಾದ ಗುಮ್ಮಟ ಕೋಟೆ ಹಂಪಿಯ ಇತಿಹಾಸವೋ  ಅರಸರ ಮೈಸೂರಿನ ವೈಭವವನ್ನೋ, ಏನನ್ನು ವರ್ಣಿಸಲಿ ?    ಹೇಗೆ ಕೊಂಡಾಡಲಿ  ನಾನು ಕನ್ನಡತನವನ್ನ ...  ಕೆಚ್ಚದೆಯ ರಾಣಿ ಚೆನ್ನಮ್ಮ, ದುರ್ಗದ ಓಬ್ಬವ್ವರ ಕುರಿತೋ  ನುಡಿಯೊಂದಿಗೆ ನಾಡ ಮೆರೆಸಿದ ಪುರಂದರ ಕನಕ ದಾಸರೊ   ಸಾಹಸವೋ ಹಿರಿಮೆಯೋ ನನಗೆ ತಿಳಿಯದು ಹೇಗೆ ವರ್ಣಿಸಲಿ ನಾನು ಕನ್ನಡತನವನ್ನ ...  ಸಾಹಿತ್ಯದ ಲಾಲಿತ್ಯ ಹೊರಹೊಮ್ಮಿಸಿದ ಪಂಪ ರನ್ನ ಪೊನ್ನರನ್ನೂ ಶತಮಾನದ  ಶ್ರೇಷ್ಠ ಕವಿಗಳಾದ ಕುವೆಂಪು ಬೇಂದ್ರೆ ಮಾಸ್ತಿಯೋ  ...