ಯಶಸ್ಸಿನ ಉಡುಗೊರೆ
ನನ್ನ ೩೭ ನೇ ಹುಟ್ಟುಹಬ್ಬ ಅಂದರೆ ೩೭ ಮುಗಿತು ೩೮ಕ್ಕೆ ಮುನ್ನಡೆತ್ತಿದಿನೋ ಅಥವಾ ತೆವಳುತ್ತಿದಿನೋ ಅಥವಾ ನುಗ್ಗತಾಇದೀನೋ ಗೊತ್ತಿಲ್ಲ. ಒಟ್ಟಿನಲ್ಲಿ ಸಮಯ ಮಾತ್ರ ಮಿಂಚಿನ ಗತಿಯಲ್ಲಿ ಚಲಿಸುತ್ತಿದೆ. ನನ್ನ ೧೫ನೆ ಹುಟ್ಟುಹಬ್ಬದಂದು ನನ್ನ ಭವಿಷ್ಯದ ಬಗ್ಗೆ ಕನಸು ಏನಿತ್ತೋ ಎನ್ನುವುದು ಈಗ ನೆನಪಿಸಿಕೊಂಡರೆ ನಗುಬರುವುದಲ್ಲೆದೆ ನಾನು ಬೆಳಸಿಕೊಳ್ಳುವ ವ್ಯಕ್ತಿತ್ವದ ಬಗ್ಗೆ ಒಂದು ರೀತಿ ವಿಚಿತ್ರವೆನಿಸುತ್ತದೆ. ನಮ್ಮ ಜೀವದಲ್ಲಿ ಸ್ನೇಹೋತರ ಸಂಬಂಧಿಕರ ಮಹತ್ವ ಎಷ್ಟು ಮುಖ್ಯ ಎಂದು ಎಲ್ಲರಿಗೆ ತಿಳಿದಿದೆ. ಪ್ರಾಯದಲ್ಲಿ ನನ್ನ ಸ್ನೇಹಿತೆಯರ ದೊಡ್ಡ ಮನೆ, ಕಾರು ಎಲ್ಲವನ್ನು ನೋಡಿ ಸಹಜವಾಗಿ ಪ್ರಭಾವಿತಳಾಗಿ ನಾನು, ಭವಿಷ್ಯದಲ್ಲಿ ಒಳ್ಳೆಯ ನೌಕರಿ ಹಿಡಿದು ಭೌತಿಕ ಐಷಾರಾಮಿನ ವಸ್ತುಗಳಿಂದ ಆರಾಮಾಗಿ ಜೀವನ ನಡೆಸುವ ಕನಸನ್ನು ಕಂಡಿದ್ದೆ.ಅದಕ್ಕೆ ತಕ್ಕಂತೆ ಸಾಕಷ್ಟು ಕಷ್ಟು ಪಟ್ಟು ನನ್ನ ವಿದ್ಯಾಭ್ಯಾಸ ಮುಗಿಸಿ ಈಗ ಆ ವಸ್ತುಗಳೆಲ್ಲ ನನ್ನ ಹತ್ತಿರ ಇದ್ದರೂ ಅದರಮೇಲಿನ ಮೋಹವು ಕಡಿಮೆ ಆಗಿದಿಯೋ ಅಥವಾ ಅವುಗಳ ಮಹತ್ವವು ತಿಳಿದಿದೆಯೋ,ಅವುಗಳ ಸ್ವಾಮ್ಯದಿಂದ ಹೆಮ್ಮೆಯೇನು ಆಗುತ್ತಿಲ್ಲ. ೩೮ನೆ ವಯಸ್ಸಿನಲ್ಲಿ ಮನವರಿಕೆಯಾದ ಹುಟ್ಟುಹಬ್ಬದ ಉಡುಗೊರೆ ಅರ್ಥ. ಈಗ ನಾನು ಪ್ರಭಾವಿತಳಾದರೆ ಅದು ಒಬ್ಬರಲ್ಲಿ ಇರುವ ಒಳ್ಳೆಯ ಗುಣ, ಒಬ್ಬ ಯೋಗಿ , ಒಬ್ಬ ಧ್ಯಾನಿ , ಸಭ್ಯ ಗುಣವುಳ್ಳ ಮಕ್ಕಳ ತಂದೆ ತಾಯಿ ,ಅನನ್ಯ ಕಲೆಯಿರುವ ವ್ಯಕ್ತಿ , ಕಠಿಣ ಪರಿಶ್ರಮದಿಂದ ವ...